ಸುಳಾದಿ

ಅಯ್ಯೋ ಸಾಕಿದೇನು ಚಂದಾ ಮೈ
ಸೋಕದಿರೆಲೋ ಮುಕುಂದ  ||ಪ||

ಗಂಡನುಳ್ಳ ನಿಜ ಗರತೀ ಒಡ-
ಗೊಂಡು ಬದಿಗೆ ಕೈ ತರುತೀ ಬಲು
ಪುಂಡಾಟಗಳ ನೀನೆಸಗುತೀ  ||೧||

ಹೆಚ್ಚು ನುಡಿಯದಿರು ನಂಟು ಕಂಡು
ಹುಚ್ಚು ಮಾಡುವದುಂಟೂ ನಡೆ
ಬಿಚ್ಚದಿರೆಲೊ ಮೊಲೆಗಂಟೂ  ||೨||

ಶ್ರೀದವಿಠಲ ಯದುರಾಯಾ ನಿನ್ನ
ಪಾದಕೆರಗುವೆನಯ್ಯಾ ನಡು-
ಬೀದಿಯೊಳಗೆ ಬಿಡು ಕೈಯಾ  ||೩||